ಮಂಜುನಾಥ್ ನಾಯಕರ್ (ಇಂಗ್ಲೀಷ್: ) ರವರು ಭಾರತೀಯ ನಟ ಮತ್ತು ಪಬ್ಲಿಕ್ ರಿಲೇಷನ್ಶಿಪ್ ವೃತ್ತಿಪರರು. ಪರದೆಯ ಹೆಸರು ಮಾಸ್ಟರ್ ಮಂಜುನಾಥ್ ಎಂಬ ಹೆಸರಿನಿಂದ ಅತಿ ಹೆಚ್ಚು ಗುರುತಿಸಲ್ಪಡುತ್ತಾರೆ. ಇವರು ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ (೧೯೮೭) ಎಂಬ ಜನಪ್ರಿಯ ದೂರದರ್ಶನದ ಸರಣಿಯಲ್ಲಿನ "ಸ್ವಾಮಿ ಆಂಡ್ ಫ್ರೆಂಡ್ಸ್" ಸಂಚಿಕೆಗಳಲ್ಲಿ ಕಾಣಲು ಸಿಗುವ "ಸ್ವಾಮಿ" ಎಂಬ ಪ್ರಮುಖ ಪಾತ್ರದಿಂದ ಪ್ರಖ್ಯಾತರಾಗಿದ್ದಾರೆ. == ಆರಂಭಿಕ ಜೀವನ == ಮಾಸ್ಟರ್ ಮಂಜುನಾಥ್ ಅವರು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಇಂಗ್ಲೀಷ್ ನಲ್ಲಿ ಹಾಗೂ ಎಂ.ಎ ಪದವಿಯನ್ನು ಸಮಾಜಶಾಸ್ತ್ರದಲ್ಲಿ ಪಡಿದಿದ್ದಾರೆ. ಇವರು ಛಾಯಾಗ್ರಹಣ ಮತ್ತು ಫೌಂಡೇಷನ್ ಕೋರ್ಸ್ನಲ್ಲಿ ಡಿಪ್ಲೊಮವನ್ನು ಕೂಡ ಹೊಂದಿದ್ದಾರೆ. == ವೃತ್ತಿಜೀವನ == ತನ್ನ ಮೂರು ವರ್ಷದ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿದ ಮಾಸ್ಟರ್ ಮಂಜುನಾಥ್ ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ೬೮ ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಸ್ವಾಮಿ ಮತ್ತು ಫ್ರೆಂಡ್ಸ್ ನ ಅವರ ಪಾತ್ರದಿಂದ ಅತಿ ಹೆಚ್ಚು ಗುರುತಿಸಲ್ಪಡುತ್ತಾರೆ. ಈ ಪಾತ್ರಕ್ಕಾಗಿ ಆರು ಅಂತಾರಾಷ್ಟ್ರೀಯ, ಒಂದು ರಾಷ್ಟ್ರೀಯ ಮತ್ತು ಒಂದು ರಾಜ್ಯ ಪ್ರಶಸ್ತಿಗಳನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ಸರಣಿಯು ೧೯೮೫-೮೬ ರಲ್ಲಿ ತನ್ನ ಶಾಲೆಯ ರಜೆಯ ಸಮಯದಲ್ಲಿ ಚಿತ್ರೀಕರಿಸಲಾಯಿತು ತದನಂತರ ೧೯೮೭ ರಲ್ಲಿ ಪ್ರಸಾರವಾಯಿತು. ಅವರು ಸೂಪರ್-ಹಿಟ್ ಸಿನೆಮಾ ನಟ-ನಿರ್ದೇಶಕ ಶಂಕರ್ ನಾಗ್ ರವರ 'ನೋಡಿ ಸ್ವಾಮಿ ನಾವಿರೋದೆ ಹೀಗೆ', 'ಎಸ್.ಪಿ.ಸಾಂಗ್ಲಿಯಾನಾ-೧', 'ಎಸ್.ಪಿ. ಸಾಂಗ್ಲಿಯಾನಾ-೨' ರಲ್ಲಿ ಅಭಿನಯಿಸಿದ್ದಾರೆ. ಅಮಿತಾಭ್ ಬಚ್ಚನ್ ಅಭಿನಯಿಸಿದ ಬಾಲಿವುಡ್ ನ ಅಗ್ನಿಪಥ್ (೧೯೯೦) ಚಿತ್ರದಲ್ಲಿನ ಯುವ ವಿಜಯ್ ದೀನನಾಥ್ ಚೌಹಾಣ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತನ್ನ ಅಧ್ಯಯನದ ಮೇಲೆ ಗಮನವಹಿಸಲು ತನ್ನ ೧೯ನೇ ವಯಸ್ಸಿನಲ್ಲಿ ಅವರು ನಟನೆಯನ್ನು ತೊರೆದರು. ಅವರು ಪಿ.ಆರ್ ವೃತ್ತಿಪರರಾಗಿದ್ದರು ಮತ್ತು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ (ಬಿ.ಎಂ.ಐ.ಸಿ.ಪಿ) ಗೆ ಕೆಲಸ ಮಾಡಿದ್ದಾರೆ. ಅವರು ಈಗ ತಮ್ಮ ಸ್ವಂತ ಪಿ.ಆರ್ ಸಲಹಾ ಕಂಪನಿಯನ್ನು ನಡೆಸುತ್ತಿದ್ದಾರೆ. == ವೈಯಕ್ತಿಕ ಜೀವನ == ಮಂಜುನಾಥ್ ರವರು ಕ್ರೀಡಾಪಟು (ಒಟ ಹಾಗು ಜಿಗಿತ ಪಟು) ಸ್ವರ್ಣರೇಖಾರನ್ನು ವಿವಾಹವಾದರು. === ಚಲನಚಿತ್ರಗಳ ಪಟ್ಟಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮಾಸ್ಟರ್ ಮಂಜುನಾಥ್ ಐ ಎಮ್ ಡಿ ಬಿನಲ್ಲಿ